ಚಿತ್ರ: ಆ ದಿನಗಳು
ಸಾಹಿತ್ಯ: ಡಿ. ಸುಮನ ಕಿತ್ತುರ್
ಸಂಗೀತ: ಇಳಯರಾಜ
ಗಾಯನ: ವಿಜಯ್ ಜೇಸುದಾಸ್

ಆ ದಿನಗಳು..
ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮ ಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯ ಏಕೆ ಬಿಟ್ಟು ಹೋದೆ!

ಆ ದಿನಗಳು..
ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ..

ದಿನ ದಿನ ಮುಖವನು ನೋಡಿ..
ಹೊಗಳುವ ಮಾತೆಲ್ಲಿ?

ಮುನಿಯುತ ಜಗಳವ ಆಡಿ..
ನಟಿಸಿದ ನಗುವೆಲ್ಲಿ?

ನನ್ನ ಕಲ್ಪನೆ ಎಲ್ಲೊ ನಿನ್ನ ಹುಡುಕಿ ಹೊಯ್ತು
ಆ ಶಿಲ್ಪದಲಿ ಕಂಡು ಮನಸು ಶಾಂತವಾಯ್ತು

ನೀನೆಲ್ಲೊ.. ನಾನೆಲ್ಲೊ ಇನ್ನು ತಾಳೆ ವಿರಹ ನೋವ

ಆ ದಿನಗಳು..
ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ!

Category: ಕನ್ನಡ ಚಿತ್ರಸಾಹಿತ್ಯ
Category: ಆ ದಿನಗಳು ಚಿತ್ರ
Category: ಡಿ. ಸುಮನ ಕಿತ್ತುರ್ ಸಾಹಿತ್ಯ
ವರ್ಗ: ವಿಜಯ್ ಜೇಸುದಾಸ್ ಗಾಯನ